Media

28-01-2018 – 22 ಜನರ ಬಾಳಿಗೆ ಬೆಳಕು ನೀಡುವಂತಹ ನೇತ್ರದಾನದ ನಿರ್ಧಾರ, ತೆಂಕಮಿಜಾರಿನ ಸಂತೆಕಟ್ಟೆಯಲ್ಲಿ ನಡೆದ ಕಣ್ಣಿನ ಶಿಬಿರದಲ್ಲಿ ನಡೆದಿರುವುದು ನಿಜಕ್ಕೂ ಸಂತಸದ ವಿಚಾರ. ಸಮಾಜಸೇವಕ ಬಿ. ಎಲ್. ದಿನೇಶ್ ಕುಮಾರ್ ತಾನು ನೇತ್ರದಾನಕ್ಕೆ ಮಾಡುವುದಾಗಿ ಘೋಷಣೆ ಮಾಡುವುದರ ಮೂಲಕ ನೇತ್ರದಾನ ನೋಂದಣಿಗೆ ಚಾಲನೆ ನೀಡಿದರು. ರುಕ್ಕಯ್ಯ ದೇವಾಡಿಗ, ಪ್ರಮೀಳಾ ದೇವಾಡಿಗ, ಮಹಾಬಲ ನಾಯ್ಕ್, ಸುಜಯ ನಾಯ್ಕ್, ಪ್ರೇಮಾ ಶೆಟ್ಟಿ, ಜಗನ್ನಾಥ್ ಚೌಟ, ಸುಂದರಿ, ಪ್ರವೀಣ, ತಾರನಾಥ, ರಾಮಚಂದ್ರ, ಹೀಗೆ ಒಟ್ಟು 11 ಮಂದಿ ನೇತ್ರದಾನ ನೋಂದಣಿಯನ್ನು ಮಾಡಿಸಿಕೊಂಡರು.

ದಾಖಲೆಯ 361 ಜನರು ವೈದ್ಯಕೀಯ ಪರೀಕ್ಷೆಗೆ ಬಂದಿದ್ದು, ಅವರಲ್ಲಿ 166 ಮಂದಿಗೆ ಕನ್ನಡಕ ಹಾಗೂ 55 ಜನರಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುವುದು. ಶಿಬಿರದ ಯಶಸ್ಸಿಗೆ ಕಾರಣರಾದ ಜಿಪಂ ಸದಸ್ಯರಾದ ಜನಾರ್ದನ ಗೌಡ ಮತ್ತು ಕೆ.ಪಿ ಸುಚರಿತ ಶೆಟ್ಟಿ, ತೆಂಕಮಿಜಾರು ಗ್ರಾಮ ಪಂಚಾಯಿತಿ ಸದಸ್ಯರಾದ ಕರುಣಾಕರ ಶೆಟ್ಟಿ, ರುಕ್ಮಯ್ಯ ಗೌಡ, ಚೈತ್ಯನ್ಯ ಭಟ್, ರಾಘವೇಂದ್ರ ರಾವ್ ಹಾಗೂ ಆಯೋಜಕರಾದ ಶುಭಕರ್ ರಾವ್, ಸುಭಾಷ್ ರಾವ್ ಹಾಗೂ ಎಲ್ಲರಿಗೂ ಅನಂತ ವಂದನೆಗಳು.

On 28-01-2018 at Vividodesha Sabhangana, Santekatte, Ashwathapura a Free Eye Check-up Camp Organised by Dr. Sudhir Hegde, President of South Canara Ophthalmic Society & Co-Convener BJP Medical Wing D.K, Mangalore. Where in Free Eye Check-up, Spectacles, Medicines and Surgery were arranged. A total of 361 participated in the camp and 11 of them B.L. Dinesh Kumar, Rukkayya Devediga, Pramila Devadiga, Mahabala Naik, Sujaya Naik, Prema Shetty, Jagannath Chowta, Sundari, Praveen, Taranath, Ramachandra volunteered for Eye Donation. 55 participants will be getting Eye Surgeries Free of Cost and more than 166 will get Free Spectacles.